Monday, September 29, 2014

"ಆಧಾರ" ದ ನಿರಾಧಾರ ಕನಸಿನ ಮೂಟೆಗಳು

"ಆಧಾರ" ದ ನಿರಾಧಾರ ಕನಸಿನ ಮೂಟೆಗಳು

ಸೇನಾನಿ ಕರ್ನಲ್ ಥಾಮ್ ಸನ್, ಕ್ಷಿಪಣಿ ವಿಜ್ಞಾನಿಯಾಗಿ ಕೆಲಸ ಮಾಡಿ ನಿವೃತ್ತಿ ನಂತರ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವರು ಹೇಳುವ ಪ್ರಕಾರ,
ವಿಶಿಷ್ಟ ಗುರುತಿನ ಚೀಟಿ ತಾನು ಮೊದಲು ಯಾವ ಉದ್ದೇಶಕ್ಕಾಗಿ ಗುರುತಿಸಲ್ಪಟ್ಟಿತೋ ಆ ಗುರಿಯನ್ನು ತಲುಪಲು ತಪ್ಪಿದ್ದೇ ಅಲ್ಲದೇ, ಅದು ನಮ್ಮ ಖಾಸಗಿ ಜೀವನದಲ್ಲಿ ಮೂಗು ತೂರಿಸುತ್ತಿರುವುದು ಜಗಜ್ಜಾಹೀರು.

ನಂದನ ನಿಲೇಕಣಿಯವರು ಹೇಳಿದ್ದ ಪ್ರಕಾರ, ವಿಶಿಷ್ಟ ಗುರುತಿನ ಚೀಟಿಯ ಉದ್ದೇಶ "ಭಾರತದ ಬಡಜನತೆ ಒಂದು ಮೂಲ ಗುರುತಿನ ಚೀಟಿಯೂ ಇಲ್ಲದೆ ಬಳಲುತ್ತಿದಾರೆ. ಇದರಿಂದ ಅವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮತ್ತು ಬಡವರಿಗೆ ಇಂತಹ ಒಂದು ಗುರುತಿನ ಚೀಟಿ ನೀಡುವುದರಿಂದ ಇಂತಹ ಸೌಕರ್ಯ ಒದಗಿಸುವುವಾಗ ವ್ಯವಸ್ಥೆಯಲ್ಲಿರುವ ಸೋರಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ". ಆದರೆ, ಈ ಚೀಟಿಯಿಂದ ಮೇಲಿನ ಉದ್ದೇಶ ಹೇಗೆ ನೆರವೇರುವುದು ಎನ್ನುವುದು ಇದುವರೆವಿಗೂ ಸ್ಪಷ್ಟವಾಗಿಲ್ಲ. ಅಲ್ಲದೇ, ಸಂಸತ್ ಸಮಿತಿಯು(parliamentary standing committee) ಈ ಚೀಟಿ ವ್ಯವಹಾರವನ್ನು ಯಾವುದೇ ನಿರ್ದಿಷ್ಟ ಗುರಿಯಿಲ್ಲದ, ತನ್ನ ಉದ್ದೇಶದ ಬಗೆಗೆ ಯಾವುದೇ ಸ್ಪಷ್ಟತೆಯಿಲ್ಲದ ಸ್ಕೀಮು ಎಂದು ತಿಳಿಸಿರುವುದು ಈ ಯೋಜನೆಯ ಬಗ್ಗೆ ಹಲವು ಊಹಾಪೋಹಗಳು ಏಳುವುದಕ್ಕೆ ಕಾರಣವಾಗಿದೆ.

ವಿಷಿಷ್ಟ ಗುರುತಿನ ಚೀಟಿಯು ಒಂದು ಸ್ವ-ಇಚ್ಛೆಯಿಂದ ಮಾಡಿಸಿಕೊಳ್ಳುವ ಯೋಜನೆ ಎಂದು ಮೊದಲು ಹೇಳಿದ್ದರೂ, ನಂದನ ನಿಲೇಕಣಿಯವರು ಇದು ಸರ್ವ-ವ್ಯಾಪಿಯಾಗಲಿದೆ ಎಂದು ತಿಳಿಸಿದ್ದಾರೆ. ಈಚೀಚೆಗೆ ಕೆಲವು ಸರ್ಕಾರಿ ಇಲಾಖೆಗಳು ಈ ಚೀಟಿಯುನ್ನು ಕಡ್ದಾಯ ಮಾಡಿ ಫರ್ಮಾನು ಹೊರಡಿಸಿವೆ. ಕರ್ನಲ್ ಥಾಮಸ್ ಹೇಳುವ ಪ್ರಕಾರ, ಒಂದು ಗುರುತಿನ ಚೀಟಿಗಾಗಿ ಇವರು ಇತರೇ 14  ಗುರುತುಗಳನ್ನು ಕೇಳುವುದು ಒಂದು ಹಾಸ್ಯಾಸ್ಪದ ಪ್ರಕ್ರಿಯೆ. ಇದು ಸರ್ಕಾರೀ ಯೋಜನೆಯಾಗಿದ್ದರೂ, ಇಲ್ಲಿರುವ ಮಾಹಿತಿಯನ್ನು ಹಣಕ್ಕಾಗಿ ಯಾರಿಗೆ ಬೇಕಾದರೂ ಮಾರಿಕೊಳ್ಳಬಹುದಾಗಿದೆ. ಅವರು ಹೇಳುವ ಪ್ರಕಾರ, ಹಣ ಗಳಿಸುವುದಕ್ಕಾಗಿ, ಜನತೆಯ ಹಣವನ್ನೇ ಬಳಸಿಕೊಂಡು ಯೋಜನೆ ರೂಪಿಸಿರುವುದು ಒಂದು ಘೋರ ಅಪರಾಧ.

ನಮ್ಮ ಖಾಸಗಿ ವಿವರಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ನಂಬಲು ಒಂದು ಕಾರಣವೆಂದರೆ, ಈ ಯೋಜನೆಗೆ ನಿಯೋಜಿಸಿರುವ ಒಂದು ಸಂಶಯಾಸ್ಪದ ಕಂಪೆನಿ, "L1 ಐ.ಡಿ.ಸಲೂಷನ್ಸ್". ಎರಡು ಕಂಪನಿಗಳನ್ನು ವಿಲೀನಗೊಳಿಸಿ ಈ ಕಂಪನಿಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಇದರಲ್ಲಿ ಒಂದು ಕಂಪನಿಯು ಈ ಮೊದಲು US Securities and Exchange Commission ರಿಂದ ಕೆಲವು ವಿಷಯಗಳಿಗಾಗಿ ವಿಚಾರಣೆಯನ್ನು ಎದುರಿಸುತ್ತಿತ್ತು. ಇದಲ್ಲದೇ, L1 ID ಸಲೂಷನ್ಸ್ ಕಂಪನಿಯು ವಿದೇಶಿ ಗೂಢಚಾರ ಕಂಪನಿಗಳೊಂದಿಗೆ ವ್ಯವಹಾರ ಹೊಂದಿದೆ. ಇದರ ಬಗ್ಗೆ ಕರ್ನಲ್ ಥಾಮಸ್ ರವರು ಕೇಳಿದ್ದ RTI ಪತ್ರಕ್ಕೆ ಸಿಕ್ಕಿದ ಉತ್ತರ "ಅದೊಂದು ಮರ್ಮ, ಆದ್ದರಿಂದ ಅದನ್ನು ನಿಮಗೆ ತಿಳಿಸಿಲಾಗುವುದಿಲ್ಲ"

ಮೈಕ್ರೋಪ್ರೊಸಸರ್ ಅಧಾರಿತ ಸಂಕ್ಷಿಪ್ತ ಸಾಧನವನ್ನು ತಯಾರಿಸುವ ನಿಪುಣ ಡಿಸೋಜರವರು ಈ ಚೀಟಿಯನ್ನು ತಯಾರಿಸಲು ಉಪಯೋಗಿಸುವ ಯಂತ್ರದ ಮೂರ್ಖತನವನ್ನು ಮನದಟ್ಟು ಮಾಡಿಸಿದರು. ಒಂದು ಫೆವಿಕಾಲ್ ನ ಮೇಲೆ ಬೆರಳಚ್ಚು  ಮೂಡಿಸಿ, ಯಂತ್ರಕ್ಕೆ ನೀಡಲಾಗಿ, ಆ ಯಂತ್ರವು ಅದನ್ನು ಬೆರಳು ಎಂದೇ ಪರಿಗಣಿಸಿದ್ದು ಅದರ ಮೂರ್ಖತನಕ್ಕೆ ಹಿಡಿದ ಕನ್ನಡಿಯಾಗಿತ್ತು. ಇದೇ ರೀತಿ ಯಾವುದೇ ಬ್ಯಾಂಕು, ATM  ಗಳನ್ನೂ ವಂಚಿಸಬಹುದು.


ಮೂಲ:http://moneylife.com/